Tuesday, October 14, 2008

ಬರೆದಿಹೆನು ಇ ಓಲೆಯ ನನ್ನವಳ ನೆನಪಿನಲಿ...

ಬರೆದಿಹೆನು ಇ ಓಲೆಯ ನನ್ನವಳ ನೆನಪಿನಲಿ
ಕೊರೆದಿಹೆನು ಇ ಹೃದಯ ನನ್ನವಳ ಹೆಸರಿನಲಿ
ಕಾರಣವ ಅರಿಯೆ ಮೌನವನು ಸರಿಯೆ...

ನಿನ್ನ ನೋಡಿದ ದಿನದಿಂದ ಮನಕಾಯಿತು ಆನಂದ
ನಿನ್ನ ನಗೆಯ ಹೂವಿಂದ ಮನವೆಲ್ಲ ಶ್ರೀಗಂದ
ಸೆರೆಯಾದೆ ನಾನು ನಿನ್ನೆಯ ಕಣ್ಣಿಂದ !!!

ನನಗಾಗೆ ನೀನು ಹುಟ್ಟಿರುವೆ ಜಾಣೆ, ಆದರು ಏಕೋ ನಾಚಿಕೆಯೋ ಕಾಣೆ
ನಿಜ ಹೇಳುವೆನು ಕೇಳೆ ನನ್ ಅಂತರಂಗದ ನೈದಿಲೆಯು ನೀನು !!!

ಕಿರುನಗೆಯ ಚೆಲ್ಲದಿರು ಕಣ್ಣಲ್ಲೇ ಕೊಲ್ಲದಿರು
ಪ್ರೇಮಿಗಳ ಲೋಕದಲಿ ನನ್ನೊಬ್ಬನೇ ಬಿಟ್ಟು ಹೋಗದಿರು ..

ಬರೆದಿಹೆನು ಇ ಓಲೆಯ ನನ್ನವಳ ನೆನಪಿನಲಿ
ಕೊರೆದಿಹೆನು ಇ ಹೃದಯ ನನ್ನವಳ ಹೆಸರಿನಲಿ
ಕಾರಣವ ಅರಿಯೆ ಮೌನವನು ಸರಿಯೆ...

No comments: